[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]
ಸುಮಾರು ಐವತ್ತರ ದಶಕದಲ್ಲಿ ಹಾಸನದ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನಾ ಸಮಾರಂಭ ನಡೆಯಿತು. ಆ ಸಭೆಯ ಅಧ್ಯಕ್ಷತೆ ಬಿ.ಡಿ. ಜತ್ತಿಯವರು ವಹಿಸಿದ್ದರು. ಉದ್ಘಾಟನೆಯನ್ನು ಮಾಡಲು ಕುವೆಂಪು ಅವರನ್ನು ಆಮಂತ್ರಿಸಿದ್ದರು. ಸಭೆ ಕಿಕ್ಕಿರಿದು ತುಂಬಿತ್ತಂತೆ. ಆಗ ಕುವೆಂಪು ಅವರು ತಮ್ಮ ಉದ್ಘಾಟನಾ ಭಾಷಣದ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ‘ನೀವೆಲ್ಲ ನಾನೇ ಜಟ್ಟಿ ಎಂದೂ (ಜತ್ತಿಯವರ ಕಡೆ ಕೈ ತೋರಿಸುತ್ತ) ಇವರೇ ಪುಟ್ಟಪ್ಪ ಎಂದು ತಿಳಿದಿರಬಹುದು. ಆದರೆ ಅದು ಹಾಗಲ್ಲ. ಇವರೇ ಜತ್ತಿ. ನಾನೇ ಪುಟ್ಟಪ್ಪ’ ಎಂದು ಹೇಳಿದಾಗ ಇಡೀ ಸಭೆ ಚಪ್ಪಾಳೆ ತಟ್ಟಿತು.