[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]
ಕುವೆಂಪು ಅವರಿಗೆ ಜ್ಞಾನಪೀಠ ಬಂದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆಗಳನ್ನು ಅರ್ಪಿಸಿತು. ಆಗ ಅಭಿನಂದನಾ ಭಾಷಣವನ್ನು ಮಾಡಿದವರು ಕವಿ ಬೇಂದ್ರೆಯವರು. ಆ ಸಾಲಿನ ಪ್ರಶಸ್ತಿಯನ್ನು ಇಬ್ಬರಿಗೆ ಹಂಚಿದ್ದರು. ಹೀಗಾಗಿ ಜ್ಞಾನಪೀಠ ಪ್ರಶಸ್ತಿಯ ಒಂದು ಲಕ್ಷ ರೂಪಾಯಿಗಳನ್ನು ಇಬ್ಬರಿಗೂ ಹಂಚಲಾಯಿತು. ಇದನ್ನು ಕುರಿತು ಬೇಂದ್ರೆಯವರು ತಮ್ಮ ಅಭಿನಂದನಾ ಭಾಷಣದಲ್ಲಿ ಪ್ರಸ್ತಾಪಿಸುತ್ತಾ, ‘ಕುವೆಂಪು ಅವರಿಗೆ ಒಂದು ಲಕ್ಷದಲ್ಲಿ ಅರ್ಧ ಲಕ್ಷ ದೊರಕಿತಾದರೂ, ಕುವೆಂಪು ಅವರಿಂದ ಕನ್ನಡವೂ ಲಕ್ಷ್ಯಕ್ಕೆ ಬಂದಿತು’ಎಂದು ಅಭಿನಂದಿಸಿದರು. ಆಗ ಇಡೀ ಸಭೆ ದೀರ್ಘ ಕರತಾಡನ ಮಾಡಿತಂತೆ.