[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]
ಒಮ್ಮೆ ಕುವೆಂಪು ತರಗತಿಯಲ್ಲಿ ನಾಗವರ್ಮನ ಕಾದಂಬರಿ ಸಂಗ್ರಹದ ಒಂದು ಪದ್ಯಕ್ಕೆ ಅರ್ಥ ಹೇಳಿ ಸ್ವಾರಸ್ಯವನ್ನು ವಿವರಿಸಿದರು. ಒಬ್ಬ ವಿದ್ಯಾರ್ಥಿ
" ಎದ್ದು ನಿಂತು “ಅರ್ಥವಾಗಲಿಲ್ಲ ಸಾರ್
"” ಎಂದ. ಕುವೆಂಪು ಮತ್ತೆ ವಿವರಿಸಿದರು. ಮತ್ತೆ ಅದೇ ವಿದ್ಯಾರ್ಥಿ ಎದ್ದು ನಿಂತು
" ಅರ್ಥವಾಗಲಿಲ್ಲ ಸಾರ್
"” ಎಂದ. ಕುವೆಂಪು ಇನ್ನೂ ಒಮ್ಮೆ ವಿವರಿಸಿ ಅರ್ಥ ಹೇಳಿದರು. ಮತ್ತೆ ಅದೇ ಹಾಡು, ಆಗ ಕುವೆಂಪು ಆ ವಿದ್ಯಾರ್ಥಿಗೆ ಹೀಗೆ ಹೇಳಿದರು
"ನೋಡಿ, ಎಷ್ಟು ಲಾಟೀನುಗಳನ್ನು ಹಚ್ಚಿಟ್ಟರೆ ತಾನೇ ದಂಡಕಾರಣ್ಯವನ್ನು ಬೆಳಗಲು ಸಾಧ್ಯ?
"