|
||||||||||
|
|
||||||||||
![]() |
||||||||||
|
|
||||||||||
| - ನೆನಪು - ಕುಪ್ಪಳಿ ಮನೆಯಲ್ಲಿ ಫೋಟೊ - | ||||||||||
|
|
||||||||||
|
[ಶ್ರೀ ಕುವೆಂಪುರವರ ನೆನಪಿನ ದೋಣಿಯಲ್ಲಿ ಪುಸ್ತಕದಿಂದ ಆಯ್ದ ಭಾಗ] “ಸುಮಾರು ೧೯೧೦ ರಲ್ಲಿ ನಾನು (ಕುವೆಂಪು) ಐದು ವರ್ಷದವನಾಗಿದ್ದಾಗ ಇರಬಹುದು. ಯಾರೊ ಒಬ್ಬ ಫೋಟೊಗ್ರಾಫರ್ ತೀರ್ಥಹಳ್ಳಿಯಿಂದಲೊ ಏನೊ ಪ್ರವಾಸಿಯಾಗಿ ಬಂದು ಕುಪ್ಪಳಿ ಮನೆಯಲ್ಲಿ, ಮನೆಯ ಪಕ್ಕದ ಒಕ್ಕುವ ಕಣದಲ್ಲಿ ನಮ್ಮ ಫೋಟೋ ತೆಗೆದದ್ದು ನನಗೆ ಮಸುಗುಮಸುಕಾಗಿ ನೆನಪಿದೆ. ಆಗಿನ ಕಾಲದಲ್ಲಿ ಪ್ರವೇಶಕ್ಕೆ ದುರ್ಗಮವಾಗಿದ್ದ ಆ ಕಾಡಿನ ಮನೆಗೆ ಹೇಗೆ ಬಂದನೊ ಆ ಪುಣ್ಯಾತ್ಮ ತಿಳಿಯದು. ನಾನು ಕಾಲಿಗೆ ನಾಯಿಗಳನ್ನು ಕಟ್ಟಿರುವ ಕುರ್ಚಿಯ ಮೇಲೆ ಕುಳಿತಿರುವ ನನ್ನ ತಂದೆಯ ಅಕ್ಕಪಕ್ಕದಲ್ಲಿ ನಿಂತಿದ್ದೇನೆ, ಕೈಕಾಲ್ಗಳಿಗೆ ಬೆಳ್ಳಿ ಬಳೆ ಹಾಕಿಕೊಂಡು, ಕಿವಿಗಳಲ್ಲಿ ಒಂಟಿಗಳಿಟ್ಟುಕೊಂಡು, ಮಗಮಲ್ಲು ಟೋಪಿ ಹಾಕಿಕೊಂಡು, ಅಡ್ಡಪಂಚೆ ಉಟ್ಟು, ಕೋಟುಹಾಕಿ, ಥೇಟ್ ಹಳ್ಳಿಯ ಭೀತ ಕಾಡಪಾಪಗಳಂತೆ! ನನ್ನ ತಂದೆ ಕಚ್ಚೆ ಪಂಚೆ ಕೋಟು ಟೋಪಿಹಾಕಿದ್ದಾರೆ. ಗಡಿಯಾರದ ಜೇಬಿನಿಂದ ಒಂದು ಬೆಳ್ಳಿಯ ಸರಪಣಿ ಕೋಟಿನ ಗುಂಡಿಯ ಜೊತೆಗೆ ಕಾಜದಿಂದ ನೇತಾಡುತ್ತಿದೆ. |
||||||||||
|
ನಮ್ಮ ಬಗ್ಗೆ | ಸಂಪರ್ಕಿಸಿ
|
||||||||||