|
[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]
೧೯೨೯ರಲ್ಲಿ ಕುವೆಂಪು ಅಧ್ಯಾಪಕರಾದ ಮೇಲೆ ಶ್ರೀ ಸ್ವಾಮಿ ಸಿದ್ಧೇಶ್ವರಾನಂದರು ಮತ್ತು
ದೇವಂಗಿ ಮಾನಪ್ಪ ಅವರು ಒಡಗೂಡಿ ದಸರಾ ರಜೆಯಲ್ಲಿ ಕಲ್ಕತ್ತ - ಬೇಲೂರು ರಾಮಕೃಷ್ಣ ಮಠಕ್ಕೆ ಪ್ರಯಾಣ ಬೆಳೆಸಿದರು.
ಹಾಗೆಯೇ ಸ್ವಾಮಿ ಶಿವಾನಂದರಿಂದ ದೀಕ್ಷೆಯನ್ನು ಪಡೆದರು. ಮದ್ರಾಸು, ಕಲ್ಕತ್ತ, ಬೇಲೂರು ಮಠಗಳ ಅನುಭವಗಳಿಂದ ಮತ್ತಷ್ಟು ಉಲ್ಲಾಸಗೊಂಡರು.
ಆಧ್ಯಾತ್ಮದ ಪ್ರೀತಿ ಮತ್ತಷ್ಟು ಗಾಢವಾಯಿತು.
|